KPSC ACADEMY Daily Top - 50 Q&A - Episode - 06 | constitution-10, science-10, geography-10, History-10 & Current affairs -10 |
Daily Top-50
Episode-06
ಸಂವಿಧಾನ - 10
1) ಭಾರತ ಸಂವಿಧಾನದಲ್ಲಿ ತುರ್ತುಪರಿಸ್ಥಿತಿಯನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಉ. ಜರ್ಮನಿ
2) ಯಾವ ಮೊಕದ್ದಮೆಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು ಪ್ರಸ್ತಾವನೆಯನ್ನು ಸಂವಿಧಾನದ ಭಾಗ ಎಂದು ತಿರ್ಪು ನೀಡಿತು?
ಉ. ಕೇಶವಾನಂದ ಭಾರತಿ ಮೊಕದ್ದಮೆ
3) ಉದ್ಯೋಗಗಳಲ್ಲಿ ಸಮಾನತೆಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉ. 16 ನೇ ವಿಧಿ
4) ಪ್ರಸ್ತುತ ಭಾರತ ಸಂವಿಧಾನದಲ್ಲಿ ಎಷ್ಟು ಮೂಲಭೂತ ಕರ್ತವ್ಯಗಳಿವೆ?
ಉ. 11
5) ರಾಷ್ಟ್ರಪತಿಯವರ ಚುನಾವಣೆಯಲ್ಲಿ ಯಾರು ಯಾರು ಭಾಗಿಯಾಗುತ್ತಾರೆ?
ಉ. ರಾಜ್ಯಸಭೆ ಲೋಕಸಭೆಯ ಚುನಾಯಿತ ಸದಸ್ಯರು ಮತ್ತು ವಿಧಾನ ಸಭೆಯ ಚುನಾಯಿತ ಸದಸ್ಯರು
6) ಲೋಕಸಭೆಯನ್ನು ವಿಸರ್ಜಿಸುವ ಬಗ್ಗೆ ತಿಳಿಸುವ ವಿಧಿ ಯಾವುದು?
ಉ. 85 ನೇ ವಿಧಿ
7) ಸಂಸತ್ತಿನ ಕಲಾಪಗಳಲ್ಲಿ ಶೂನ್ಯ ವೇಳೆಯ ಅವಧಿ ಯಾವಾಗ?
ಉ. ಮಧ್ಯಾಹ್ನ 12 ರಿಂದ 1 ಗಂಟೆ ವರೆಗೆ
8) ರಾಷ್ಟ್ರಪತಿಯವರ ಪಾಕೆಟ್ ವೀಟೋ ಎಂದರೇನು?
ಉ. ಸಂಸತ್ತಿನಲ್ಲಿ ಅಂಗೀಕಾರವಾದ ಮಸೂದೆಯನ್ನು ಅನಿರ್ದಿಷ್ಟಾವಧಿ ವರೆಗೆ ಇಟ್ಟು ಕೊಳ್ಳುವುದು.
9) ಸಂವಿಧಾನದ ಪ್ರಕಾರ ಸುಗ್ರೀವಾಜ್ಞೆ ಎಂದರೇನು?
ಉ. ಸಂಸತ್ತಿನ ಅಧಿವೇಶನ ಇಲ್ಲದೆ ಇದ್ದಾಗ ರಾಷ್ಟ್ರಪತಿ ಆದೇಶದ ಮೂಲಕ ಜಾರಿಗೆ ತರುವ ಕಾಯ್ದೆ
10) ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗದ ಬಗ್ಗೆ ತಿಳಿಸುವ ವಿಧಿ ಯಾವುದು?
ಉ. 315 ನೇ ವಿಧಿ
Note : ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.
ಇತಿಹಾಸ - 10
1) ಶಾತವಾಹನ ವಂಶದ ಸ್ಥಾಪಕ ಯಾರು?
ಉ. ಸಿಮುಖ
2) ಕದಂಬ ವಂಶದ ಸ್ಥಾಪಕ ಮಯೂರವರ್ಮ ನ ಬಗ್ಗೆ ತಿಳಿಸುವ ಶಾಸನ ಯಾವುದು?
ಉ. ಚಂದ್ರವಳ್ಳಿ
3) ತಾಳಗುಂದ ಶಾಸನವನ್ನು ರಚಿಸಿದವರು ಯಾರು?
ಉ. ಕವಿ ಕುಬ್ಜ
4) ರಾಷ್ಟ್ರಕೂಟರ ಅರಸ ಅಮೋಘವರ್ಷ ನೃಪತುಂಗನ ಮೂಲ ಹೆಸರೇನು?
ಉ. ಶಿರ್ವ
5) ಕವಿ ಜನ್ನನಿಗೆ ಆಶ್ರಯ ನೀಡಿದ ಹೊಯ್ಸಳರ ದೊರೆ ಯಾರು?
ಉ. ಎರಡನೇ ಬಲ್ಲಾಳ
6) ತಾಳಿಕೋಟೆ ಕದನ ಯಾವಾಗ ನಡೆಯಿತು?
ಉ. ಕ್ರಿ. ಶ. 1565 ದಿಲ್ಲಿ
7) ಬಹುಮನಿ ಸಾಮ್ರಾಜ್ಯ ಸ್ಥಾಪಕ ಯಾರು?
ಉ. ಅಲ್ಲಾವುದ್ದಿನ್ ಹಸನ್ ಗಂಗು ಬಹಮನ್ ಷಾ
8) ಕಲಬುರ್ಗಿಯಿಂದ ಬೀದರಿಗೆ ರಾಜಧಾನಿಯನ್ನು ವರ್ಗಾಯಿಸಿದ ಬಹುಮನಿ ರಾಜ ಯಾರು?
ಉ. ಒಂದನೇ ಅಹಮದ್ ಶಾ
9) ದಿವಾನ ಹುದ್ದೆಯನ್ನು ಸೃಷ್ಟಿಸಿದ ಒಡೆಯರ್ ಯಾರು?
ಉ. ಹತ್ತನೇ ಜಯಚಾಮರಾಜೇಂದ್ರ ಒಡೆಯರ್
10) ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಆರಂಭಿಸಿದ ದಿವಾನರು ಯಾರು?
ಉ. ಕೆ ಶೇಷಾದ್ರಿ ಅಯ್ಯರ್
ವಿಜ್ಞಾನ - 10
1) ಮೈಟೋಕಾಂಡ್ರಿಯಾ ದಲ್ಲಿ ಕಂಡು ಬರುವ ಬೆಳಗ್ಗೆ ಬೆರಳಿನ ಆಕಾರಗಳ ರಚನೆಗಳಿಗೆ ಏನೆನ್ನುವರು?
ಉ. ಕ್ರಿಸ್ಟಲ್
2) ದೇಹದೊಳಗೆ ರಕ್ತ ಹೆಪ್ಪು ಗಟ್ಟದಂತೆ ತಡೆಯುವ ಪ್ರೋಟಿನ್ ಯಾವುದು?
ಉ. ಹೆಪರಿನ್
3) ಮೂತ್ರದ ಮೂಲಕ ಯಾವ ವಿಟಮಿನ್ ವಿಸರ್ಜಿಸಲ್ಪಡುತ್ತದೆ?
ಉ. ವಿಟಮಿನ್ ಸಿ
4) ಮೂಳೆಗಳ ಕುರಿತು ಅಧ್ಯಯನ ಮಾಡುವುದನ್ನು ಏನೆಂದು ಕರೆಯುತ್ತಾರೆ?
ಉ. ಅಸ್ಟಿಯೋಲಾಜಿ
5) ರಕ್ತಪರಿಚಲನೆಯ ಪಿತಾಮಹ ಯಾರು?
ಉ. ವಿಲಿಯಂ ಹಾರ್ವೆ
6) ಚರ್ಮದ ಬಣ್ಣಕ್ಕೆ ಕಾರಣವಾಗುವ ರಾಸಾಯನಿಕ ವಸ್ತು ಯಾವುದು?
ಉ. ಮೆಲನಿನ್
7) ದೇಹದ ಅತಿ ದೊಡ್ಡ ಮೂಳೆ ಯಾವುದು?
ಉ. ಫೀಮರ್
- ತೊಡೆ ಭಾಗದಲ್ಲಿ
8) ಯಾವ ಸಸ್ಯದಿಂದ ಜೈವಿಕ ಡೀಸೆಲ್ ಇಂಧನವನ್ನು ತಯಾರಿಸುತ್ತಾರೆ?
ಉ. ಜಟ್ರೋಫಾ
9) ಆಲೂಗಡ್ಡೆ ಮತ್ತು ಶುಂಠಿ ಸಸ್ಯದ ಯಾವ ಭಾಗದ ರೂಪಂತರ?
ಉ. ಕಾಂಡ
10) ಅತ್ಯಂತ ದೊಡ್ಡ ಹೂ ಯಾವುದು?
ಉ. ರೆಪ್ಲೆಸೀಯಾ
Note : ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.
ಭೂಗೋಳಶಾಸ್ತ್ರ - 10
1) ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿದ ಸ್ಥಳ ಯಾವುದು?
ಉ. ರಾಜಸ್ಥಾನದ ಗಂಗಾನಗರ
- 52°C
2) ಮಳೆಗಾಲದಲ್ಲಿ ಮಳೆ ಪಡೆಯದೆ ಇರುವ ಭಾರತದ ಏಕೈಕ ರಾಜ್ಯ ಯಾವುದು?
ಉ. ತಮಿಳುನಾಡು
3) ಮಣ್ಣಿನ ಬಗ್ಗೆ ಅಧ್ಯಯನ ಮಾಡುವುದನ್ನು ಏನೆನ್ನುವರು?
ಉ. Pedology
4) ಕಪ್ಪು ಮಣ್ಣು ಹೇಗೆ ಉತ್ಪತ್ತಿಯಾಗುತ್ತದೆ?
ಉ. ಅಗ್ನಿ ಶಿಲೆಗಳ ಶಿಥಲೀಕರಣ ದಿಂದ
5) ಸ್ವತಂತ್ರ ಭಾರತದ ಮೊದಲ ನದಿ ಕಣಿವೆ ಯೋಜನೆ ಯಾವುದು?
ಉ. ದಾಮೋದರ್ ನದಿ ಕಣಿವೆ ಯೋಜನೆ
6) ಬಿಹಾರದ ಕಣ್ಣೀರಿನ ನದಿ ಎಂದು ಯಾವುದನ್ನು ಕರೆಯುತ್ತಾರೆ?
ಉ. ಕೋಸಿ ನದಿ
7) ಒರಿಸ್ಸಾದ ಕಣ್ಣೀರಿನ ನದಿ ಎಂದು ಯಾವುದನ್ನು ಕರೆಯುತ್ತಾರೆ?
ಉ. ಮಹಾನದಿ
8) ಭಾರತದಲ್ಲಿ ಅತಿ ಹೆಚ್ಚು ಪ್ರವಾಹಕ್ಕೆ ತುತ್ತಾಗುವ ರಾಜ್ಯ ಯಾವುದು?
ಉ. ಅಸ್ಸಾಂ
- ಬ್ರಹ್ಮ ಪುತ್ರ ನದಿಯಿಂದ
9) ಲಾಲ್ ಬಹುದ್ದೂರ್ ಶಾಸ್ತ್ರಿ ಜಲಾಶಯ ಎಂದು ಯಾವುದನ್ನು ಕರೆಯುತ್ತಾರೆ?
ಉ. ಆಲಮಟ್ಟಿ ಆಣೆಕಟ್ಟು
10) ಭತ್ತದ ಕಣಜ ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
ಉ. ಆಂಧ್ರಪ್ರದೇಶ
ಪ್ರಚಲಿತ ಘಟನೆಗಳು - 10
1) 93 ನೇ ಆಸ್ಕರ್ ಪ್ರಶಸ್ತಿಗಳಲ್ಲಿ ಯಾರು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ?
ಉ. ನೆಮಾಡ್ಲ್ಯಾಂಡ್
2) ಕೈಬಿಟ್ಟ ಮಕ್ಕಳ ಪುನರ್ ವಸತಿಗಾಗಿ ಯಾವ ರಾಜ್ಯದ ಹರಿಹಾರ್ ನೀತಿಯನ್ನು ಪ್ರಾರಂಭಿಸಿದೆ?
ಉ. ಹರಿಯಾಣ
3) ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅನುಭವಿ ತಮ್ಮ 70ನೇ ವಯಸ್ಸಿನಲ್ಲಿ ಕಾರಣದಿಂದ ನಿಧನರಾದರು ಅವರ ಹೆಸರೇನು?
ಉ. ರಾಜನ್ ಮಿಶ್ರ
4) ಇತ್ತೀಚಿಗೆ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯಾಧೀಶರೊಬ್ಬರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು ಅವರ ಹೆಸರೇನು?
ಉ. ಮೋಹನ ಶಾಂತನಗೌಡರ್
5) ಇತ್ತೀಚಿಗೆ ಹೈಬ್ರಿಡ್ ಮೇಘವನ್ನು ಒದಗಿಸುವ ಡಿಜಿಟಲ್ ಇನ್ ಯುಎಸ್ ಅನ್ನು ಯಾವ ಐಟಿ ಕಂಪನಿ ಸ್ವಾಧೀನಪಡಿಸಿಕೊಂಡಿದೆ?
ಉ. ಟೆಕ್ ಮಹೀಂದ್ರ
6) ಚೀನಾದ ಮೊದಲ ಮಾರ್ಸ್ ರೋವರ್ ಹೆಸರೇನು?
ಉ. ಜುರಾಂಗ್
7) 2022ರ ವೇಳೆಗೆ ಯಾವ ರಾಜ್ಯವು ಹೇರ್ ಘರ್ ಜಲ್ ರಾಜ್ಯವಾಗಲಿದೆ?
ಉ. ಪಂಜಾಬ್
8) ಜಾಗತಿಕ ಶಕ್ತಿ ಪರಿವರ್ತನೆ ಸೂಚಂಕ 2021ರಲ್ಲಿ ಯಾವ ದೇಶ ಕೊನೆಯ ಸ್ಥಾನದಲ್ಲಿದೆ?
ಉ. ಜಿಂಬಾಬ್ವೆ
9) ಇತ್ತೀಚಿಗೆ ಕೋವೀಡ್-19 ರೋಗಿಗಳಿಗೆ ಬ್ಯಾರಿಸಿಟಿನಿಬ್ ಬಳಕೆಯನ್ನು ಯಾವ ದೇಶ ಅನುಮೋದಿಸಿದೆ?
ಉ. ಜಪಾನ್
10) ಇತ್ತೀಚಿಗೆ ಯಾವ ಬಾಹ್ಯಾಕಾಶ ಸಂಸ್ಥೆ ಗುರಾಣಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದರು?
ಉ. ನಾಸಾ
Note : ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.
ನಮ್ಮ ಹಿಂದಿನ ನೋಟ್ಸ್ 👇 👇
For instant notification join our following groups
Comments
Post a Comment