ದಿನಕ್ಕೊಂದು ಕವಿ ಪರಿಚಯ | ಗಿರೀಶ್ ಕಾರ್ನಾಡ್ | ಕನ್ನಡಕ್ಕೆ 7 ನೇ ಜ್ಞಾನ ಪೀಠ ಪ್ರಶಸ್ತಿ ದೊರಕಿಸಿಕೊಟ್ಟವರು
ದಿನಕ್ಕೊಂದು ಕವಿ ಪರಿಚಯ
ಗಿರೀಶ್ ಕಾರ್ನಾಡ್
ಜನನ - 5/9/1938
ಮರಣ - 10 June 2019
ವೃತ್ತಿ - ನಾಟಕಕಾರ, ನಟ, ನಿರ್ದೇಶಕ
ತಂದೆ. - ಡಾ॥ ರಘುನಾಥ್ ಕಾರ್ನಾಡ್
ತಾಯಿ. - ಕೃಷ್ಣಾ ಬಾಯಿ
- ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ.
ಜೀವನ
- ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು
- ಬಳಿಕ ರ್ಹೊಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು
- ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು.
- ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು. ಇವರು ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು
- ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ಆಕ್ಸ್ ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ನೌಕರಿಯಲ್ಲಿದ್ದು, ಅದನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.
ನಾಟಕಗಳು
- ಮಾ ನಿಷಾಧ - ಏಕಾಂಕ ನಾಟಕ
- ಯಯಾತಿ - ೧೯೬೧
- ತುಘಲಕ್ - ೧೯೬೪
- ಹಯವದನ - ೧೯೭೨(ನಾಟ್ಯರಂಗ ಪ್ರಶಸ್ತಿ )
- ಅಂಜುಮಲ್ಲಿಗೆ - ೧೯೭೭
- ಹಿಟ್ಟಿನ ಹುಂಜ ಅಥವಾ ಬಲಿ - ೧೯೮೦
- ನಾಗಮಂಡಲ - ೧೯೯೦
- ತಲೆದಂಡ - ೧೯೯3
- ಅಗ್ನಿ ಮತ್ತು ಮಳೆ - ೧೯೯೫
- ಟಿಪ್ಪುವಿನ ಕನಸುಗಳು - ೧೯೯೭
- ಒಡಕಲು ಬಿಂಬ - ೨೦೦೫
- ಮದುವೆ ಅಲ್ಬಮ್
- ಫ್ಲಾವರ್ಸ - ೨೦೧೨
- ಬೆಂದ ಕಾಳು ಆನ್ ಟೋಸ್ಟ- ೨೦೧೨
ಆತ್ಮ ಚರಿತ್ರೆ
- ಆಡಾಡತ ಆಯುಷ್ಯ (೨೦೧೧)
ಪ್ರಶಸ್ತಿ, ಸನ್ಮಾನಗಳು
- ಸಿನಿಮಾ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
- ಗುಬ್ಬಿ ವೀರಣ್ಣ ಪ್ರಶಸ್ತಿ,
- ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,
- ಪದ್ಮಶ್ರೀ -೧೯೭೪
- ಪದ್ಮಭೂಷಣ -೧೯೯೨
- ಜ್ಞಾನಪೀಠ -೧೯೯೮
- ಕಾಳಿದಾಸ ಸಮ್ಮಾನ್ - ೧೯೯೮
- ಕಾರ್ನಾಡ್ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ೧೯೮೮-೯೩ ಕಾರ್ಯನಿರ್ವಹಿಸಿದ್ದಾರೆ.
- ಇಂಗ್ಲೆಂಡ್‌ನಲ್ಲಿ ನೆಹರು ಸೆಂಟರ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
- ಟಾಟಾ ಲಿಟರೇಚರ್ ಲೈವ ಜೀವಮಾನ ಸಾಧನೆ (ಚಿತ್ರೋದ್ಯಮ)-2017
- ಡಾ.ಟಿ.ಎಂ.ಎ.ಪೈ ವಿಶಿಷ್ಟ ಕೊಂಕಣಿ ಸಾಧಕ ಪ್ರಶಸ್ತಿ (1996)

Comments
Post a Comment