ದಿನಕ್ಕೊಂದು ಕವಿ ಪರಿಚಯ - ಕುವೆಂಪು

 

 ದಿನಕ್ಕೊಂದು ಕವಿ ಪರಿಚಯ


ಕುವೆಂಪು


ಬಾಲ್ಯ


ಪೂರ್ಣ ಹೆಸರು - ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ

ಜನನ - 29-12-1904

ಸ್ಥಳ - ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ

ತಂದೆ – ವೆಂಕಟಪ್ಪ

ತಾಯಿ – ಸೀತಮ್ಮ



ಶಿಕ್ಷಣ


ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು

ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು

ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ

ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು

ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.


ವೃತ್ತಿಜೀವನ


ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು.



ವೈವಾಹಿಕ ಜೀವನ


ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು.

ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು


ಕೃತಿಗಳು


ಮಹಾಕಾವ್ಯ


1. ಶ್ರೀ ರಾಮಾಯಣ ದರ್ಶನಂ (1949)


ಕವನ ಸಂಕಲನಗಳು


ಕೊಳಲು (1930), ಕಲಾಸುಂದರಿ (1934), ಪ್ರೇಮ ಕಾಶ್ಮೀರ (1946), ಅಗ್ನಿಹಂಸ (1946), ಪಕ್ಷಿಕಾಶಿ (1946), ಚಂದ್ರಮಂಚಕೆ ಬಾ ಚಕೋರಿ (1957), ಇಕ್ಷುಗಂಗೋತ್ರಿ (1957), ಅನಿಕೇತನ (1963), ಮಂತ್ರಾಕ್ಷತೆ (1966), ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981)


ಕಥಾ ಸಂಕಲನ


1. ಸಂನ್ಯಾಸಿ ಮತ್ತು ಇತರ ಕಥೆಗಳು (1936)

2. ನನ್ನ ದೇವರು ಮತ್ತು ಇತರ ಕಥೆಗಳು (1940)


ಕಾದಂಬರಿಗಳು


1. ಕಾನೂರು ಹೆಗ್ಗಡತಿ (1936)

2. ಮಲೆಗಳಲ್ಲಿ ಮದುಮಗಳು (1967)


ನಾಟಕಗಳು


ಯಮನ ಸೋಲು (1928), ಬಿರುಗಾಳಿ (1930), ವಾಲ್ಮೀಕಿಯ ಭಾಗ್ಯ (1931), ಸ್ಶಶಾನ ಕುರುಕ್ಷೇತ್ರಂ (1931), ಶೂದ್ರ ತಪಸ್ವಿ (1944), ಚಂದ್ರಹಾಸ (1963)


ಪ್ರಬಂಧ


1. ಮಲೆನಾಡಿನ ಚಿತ್ರಗಳು (1933)


ಆತ್ಮಕಥೆ


1. ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ


ಪ್ರಶಸ್ತಿ ಪುರಸ್ಕಾರಗಳು


ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - (ಶ್ರೀರಾಮಾಯಣ ದರ್ಶನಂ) (1955)

ಪದ್ಮಭೂಷಣ (೧೯೫೮)

ರಾಷ್ಟ್ರಕವಿ ಪುರಸ್ಕಾರ (೧೯೬೪)

ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೮)

ಪಂಪ ಪ್ರಶಸ್ತಿ (೧೯೮೮

ಪದ್ಮವಿಭೂಷಣ (೧೯೮೯)

ಕರ್ನಾಟಕ ರತ್ನ (೧೯೯೨)

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ 

ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ (ಮರಣೋತ್ತರ)

Comments

Popular posts from this blog

ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್