ದಿನಕ್ಕೊಂದು ಕವಿ ಪರಿಚಯ - ದ.ರಾ. ಬೇಂದ್ರೆ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್
ದಿನಕ್ಕೊಂದು ಕವಿ ಪರಿಚಯ
ದ.ರಾ. ಬೇಂದ್ರೆ
ಬೇಂದ್ರೆಯವರು 1896 ನೆಯ ಇಸವಿ ಜನವರಿ 31 ರಂದು ಜನಿಸಿದರು.
ತಂದೆ - ರಾಮಚಂದ್ರ ಭಟ್ಟ
ತಾಯಿ - ಅಂಬಿಕೆ(ಅಂಬವ್ವ).
ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ.
ಸಾಹಿತ್ಯ
1918 ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು.
ಕವನ ಸಂಕಲನಗಳು.
"ಗರಿ",
"ಕಾಮಕಸ್ತೂರಿ ",
"ಸೂರ್ಯಪಾನ",
"ನಾದಲೀಲೆ",
"ನಾಕುತಂತಿ"
ಇವರ ನಾಕುತಂತಿ ಕೃತಿಗೆ 1973 ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ.
ಇವರನ್ನು "ಕನ್ನಡದ ಠಾಗೋರ್" ಎಂದು ಕರೆಯಲಾಗುತ್ತದೆ.
ಪ್ರಶಸ್ತಿ, ಪುರಸ್ಕಾರ, ಬಿರುದು
1) 1943 ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
2) 1958 ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
3) 1964 ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ.
4) 1965 ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ.
5) 1968 ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು.
6) 1973 ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ.
7) ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್.
8) ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.
ಪ್ರತಿದಿನ ನೋಟ್ಸ್ ಗಾಗಿ ನಮ್ಮ ವಾಟ್ಸಪ್ ಚಾನಲ್ ಇಂದೇ Join ಆಗಿ
https://chat.whatsapp.com/FhpsalidRWm2MeLzE1wEZB

Comments
Post a Comment