ದಿನಕ್ಕೊಂದು ಕವಿ ಪರಿಚಯ | ವಿನಾಯಕ ಕೃಷ್ಣ ಗೋಕಾಕ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್
ದಿನಕ್ಕೊಂದು ಕವಿ ಪರಿಚಯ
ವಿನಾಯಕ ಕೃಷ್ಣ ಗೋಕಾಕ
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟರು.
ಜನನ - ೧೯೦೯ ಆಗಸ್ಟ್ ೯ ಸವಣೂರು, ಹಾವೇರಿ ಜಿಲ್ಲೆ
ಮರಣ - ೧೯೯೨ ಏಪ್ರಿಲ್ ೨೮ ಹಾಸನ
ತಂದೆ - ಕೃಷ್ಣರಾಯರು
ಕಾದಂಬರಿಗಳು
ಸಮರಸವೇ ಜೀವನ
ಇಜ್ಜೋಡು
ಏರಿಳಿತ
ಸಮುದ್ರಯಾನ
ನಿರ್ವಹಣ ನರಹರಿ
ಮಹಾಕಾವ್ಯ
ಭಾರತ ಸಿಂಧು ರಶ್ಮಿ - ವಿನಾಯಕರು ರಚಿಸಿದ ಮಹಾಕಾವ್ಯ.
Important Note :
ಭಾರತ ಸಿಂಧು ರಶ್ಮಿ - ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳ ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತದ್ದು.ವಿಶ್ವಾಮಿತ್ರ ಈ ಕಾವ್ಯದ ನಾಯಕ.(ಈ ಕಾವ್ಯಕ್ಕೆ ವಿನಾಯಕ ಕೃಷ್ಣ ಗೋಕಾಕ ರವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.)
ಕವನ ಸಂಕಲನಗಳು
ಸಮುದ್ರಗೀತೆಗಳು
ನವ್ಯ ಕವಿಗಳು
ತ್ರಿಶಂಕುವಿನ ಪ್ರಜ್ಞಾ ಪ್ರಭಾತ.
ಬಾಳದೇಗುಲದಲ್ಲಿ
ಪಾರಿಜಾತದಡಿಯಲ್ಲಿ
ಸಾಹಿತ್ಯ ವಿಮರ್ಶೆ
ಕವಿಕಾವ್ಯ ಮಹೋನ್ನತಿ
ನವ್ಯ ಮತ್ತು ಕಾವ್ಯ ಜೀವನ
ಪ್ರವಾಸ ಕಥನ
ಸಮುದ್ರದಾಚೆದಿಂದ
ಪಯಣಿಗ
ಗೌರವಗಳು ಮತ್ತು ಪ್ರಶಸ್ತಿಗಳು
1) ಬಳ್ಳಾರಿಯಲ್ಲಿ ೧೯೫೮ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು
2) ಕೇಂದ್ರ ಸರ್ಕಾರ ೧೯೬೧ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿದೆ.
3) ಹಂಪಿ ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ ಪದವಿ ೧೯೬೫.
4) ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ
5) ಗೋಕಾಕರ "ದ್ಯಾವಾ ಪೃಥಿವೀ" ಕವನ ಸಂಕಲನಕ್ಕೆ ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿತು.

Comments
Post a Comment