ದಿನಕ್ಕೊಂದು ಕವಿ ಪರಿಚಯ - ಮಾಸ್ತಿ ವೆಂಕಟೇಶ ಅಯ್ಯಂಗಾರ್ | "ಮಾಸ್ತಿ ಕನ್ನಡದ ಆಸ್ತಿ"
ದಿನಕ್ಕೊಂದು ಕವಿ ಪರಿಚಯ
ಮಾಸ್ತಿ ವೆಂಕಟೇಶ ಅಯ್ಯಂಗಾರ್
"ಮಾಸ್ತಿ ಕನ್ನಡದ ಆಸ್ತಿ"
ಜನನ - ಜೂನ್ 6, 1891
ಮರಣ - ಜೂನ್ 6, 1986
ವೃತ್ತಿ - ಜಿಲ್ಲಾಧಿಕಾರಿ, ಪ್ರೊಫೆಸರ್, ಲೇಖಕ
ಸಾಹಿತ್ಯ
ಸಣ್ಣ ಕಥೆ ಸಂಗ್ರಹ
- ಸಣ್ಣಕತೆಗಳ(೫ ಪುಟಗಳು)
- ರಂಗನ ಮದುವೆ
- ಮಾತುಗಾರ ರಾಮ
ಕಾವ್ಯ ಸಂಕಲನಗಳು
- ಬಿನ್ನಹ, ಮನವಿ(೧೯೨೨)
- ತಾವರೆ(೧೯೩೦)
- ಸಂಕ್ರಾಂತಿ(೧೯೬೯)
- ನವರಾತ್ರಿ(೫ ಭಾಗ ೧೯೪೪-೧೯೫೩)
- ಚೆಲುವು, ಸುನೀತ
- ಶ್ರೀರಾಮ ಪಟ್ಟಾಭಿಷೇಕ (ಖಂಡಕಾವ್ಯ)
ಜೀವನ ಚರಿತ್ರೆ
- ರವೀಂದ್ರನಾಥ ಠಾಕೂರ್(೧೯೩೫)
- ಶ್ರೀ ರಾಮಕೃಷ್ಣ(೧೯೩೬)
ನಾಟಕ
- ಶಾಂತಾ, ಸಾವಿತ್ರಿ, ಉಷಾ (೧೯೨೩)
- ತಾಳೀಕೋಟೆ(೧೯೨೯)
- ಶಿವಛತ್ರಪತಿ(೧೯೩೨)
- ಯಶೋಧರಾ(೧೯೩೩)
- ಕಾಕನಕೋಟೆ(೧೯೩೮)
- ಲಯರ್ ಮಾಹಾರಾಜ
- ಶೇಕ್ಸ್ ಪಿಯರ್ ದೃಶ್ಯಗಳು ೧,೨,೩
- ಪುರಂದರದಾಸ
- ಕನಕಣ್ಣ
- ಕಾಳಿದಾಸ
ಕಾದಂಬರಿ
- ಚೆನ್ನಬಸವ ನಾಯಕ(೧೯೫೦)
- ಚಿಕವೀರ ರಾಜೇಂದ್ರ(೧೯೫೬)
ಪ್ರಶಸ್ತಿಗಳು
- ಜ್ಞಾನಪೀಠ ಪ್ರಶಸ್ತಿ (೧೯೮೩) (ಚಿಕ್ಕವೀರ ರಾಜೇಂದ್ರ ಕೃತಿಗೆ)
- ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್(೧೯೭೭)
- ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್(೧೯೫೬)
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೮)
- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ(೧೯೫೩)
- ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ(೧೯೪೬)
ಗೌರವಗಳು
ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ. "ಮಾಸ್ತಿ ಕನ್ನಡದ ಆಸ್ತಿ" ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ.
- ಎಲ್ಲ ಸಾಹಿತಿಗಳಿಗೂ ಅವರು "ಅಣ್ಣ ಮಾಸ್ತಿ"ಯಾಗಿದ್ದರು. ವರಕವಿ ದ ರಾ ಬೇಂದ್ರೆ ಮಾಸ್ತಿಯವರನ್ನು ಹಿರಿಯಣ್ಣ ಎಂದು ಗೌರವಿಸಿದ್ದರು.
- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಸ್ತಿ ಸೇವೆ ಸಲ್ಲಿಸಿದರು.
- ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.
- ಮೈಸೂರು ಮಹಾರಾಜರು "ರಾಜಸೇವಾ ಪ್ರಸಕ್ತ" ಎಂದು ಗೌರವಿಸಿದ್ದರು.
- ೧೯೭೨ರಲ್ಲಿ " ಶ್ರೀನಿವಾಸ " ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು.
ನಮ್ಮ ಹಿಂದಿನ ಲೇಖನಗಳು

Comments
Post a Comment