KPSC ACADEMY Daily Top - 50 Q&A | constitution-10, science-10, geography-10, History-10 & Current affairs -10 | Episode - 02
Daily Top-50
Episode-02
ಸಂವಿಧಾನ - 10
1) ಯಾವುದನ್ನು ಭಾರತದ ಖಜಾನೆ ಕಾಯುವ ಕಾವಲು ನಾಯಿ ಸಂಸ್ಥೆ ಎನ್ನುವರು?
ಉ. CAG (ಕಂಪ್ರೋಲರ್ ಅಂಡ್ ಆಡಿಟರ್ ಜನರಲ್)
2) ರಾಜ್ಯಸಭೆಯ ಕಲಾಪ ನಡೆಸಲು ಎಷ್ಟು ಸದಸ್ಯರು ಹಾಜರಿರಬೇಕು?
ಉ. 1/10 (25 ಸದಸ್ಯರು)
3) ಅಧಿಕಾರದಲ್ಲಿದ್ದಾಗ ಮರಣ ಹೊಂದಿದ ಏಕೈಕ ಲೋಕಸಭಾ ಸ್ಪೀಕರ್ ಯಾರು?
ಉ. G M C ಬಾಲಯೋಗಿ
4) ಯಾವ ಮಸೂದೆಯನ್ನು ಕೇವಲ ಲೋಕಸಭೆಯಲ್ಲಿ ಮಾತ್ರ ಮಂಡಿಸಬಹುದು?
ಉ. ಹಣಕಾಸಿನ ಮಸೂದೆಗಳನ್ನು
5) ಸಂಸತ್ತಿನ ಅಧಿವೇಶನಗಳಲ್ಲಿ ಮೊದಲು ಯಾವ ಅಧಿವೇಶನ ನಡೆಯುತ್ತದೆ?
ಉ. ಬಜೆಟ್ ಅಧಿವೇಶನ
6) ಸಂಸತ್ತಿನ ಕಲಾಪಗಳಲ್ಲಿ ಶೂನ್ಯ ಅವಧಿ ಯಾವಾಗ ಇರುತ್ತದೆ?
ಉ. 12 ರಿಂದ 1 ಗಂಟೆ ವರೆಗೆ
7) ಸಂಸತ್ತಿನ ಸಮಿತಿಗಳಲ್ಲಿ ಅತಿ ದೊಡ್ಡ ಸಮಿತಿ ಯಾವುದು?
ಉ. ಅಂದಾಜು ಸಮಿತಿ
- 30 ಸದಸ್ಯರು
8) ನೇಮ್ ಡಕ್ ಅಧಿವೇಶನ ಎಂದರೇನು?
ಉ. ಲೋಕಸಭೆಯ ಕೊನೆಯ ಅಧಿವೇಶನವನ್ನು
9) ರಾಜ್ಯದ ಅತ್ಯುನ್ನತ ಕಾನೂನು ಅಧಿಕಾರಿ ಯಾರು?
ಉ. ಅಡ್ವಕೇಟ್ ಜನರಲ್
10) ಭಾರತದ ಪಂಚಾಯತ್ ರಾಜ್ ಪಿತಾಮಹ ಯಾರು?
ಉ. ಬಲವಂತರಾಯ ಮೆಹತಾ
ಇತಿಹಾಸ - 10
1) ವೈದ್ಯಶಾಸ್ತ್ರದ ಪಿತಾಮಹ ಯಾರು?
ಉ. ಹಿಪೊಕ್ರೆಟಿಸ್
2) ರೋಮ್ ನಾಗರಿಕತೆ ಯಾವ ನದಿ ದಂಡೆಯ ಮೇಲೆ ಬೆಳೆಯಿತು?
ಉ. ಟೈಬರ್
3) ಯಾರ ಯುಗವನ್ನು ರೋಮ್ ನಾಗರಿಕತೆಯ ಸುವರ್ಣಯುಗ ಎನ್ನುವರು?
ಉ. ಅಗಸ್ಟಸ್ ಸೀಜರ್
4) ಮಹಾವೀರ ಯಾವ ಸ್ಥಳದಲ್ಲಿ ನಿರ್ವಾಣ ಹೊಂದಿದರು?
ಉ. ಬಿಹಾರದ ರಾಜಗೃಹ ಬಳಿ ಪವಾಪುರಿ
- ಕ್ರಿ. ಪೂ. 527
5) ಮೊದಲ ಜೈನ ಸಮ್ಮೇಳನ ನಡೆದ ಸ್ಥಳ ಯಾವುದು?
ಉ. ಪಟಲಿಪುತ್ರ
- ಕ್ರಿ.ಪೂ. 300
- ಅಧ್ಯಕ್ಷತೆ : ಸ್ಥೂಲ ಬಾಹು
6) ಬುದ್ಧ ಜನಿಸಿದ ಸ್ಥಳ ಯಾವುದು?
ಉ. ಲುಂಬಿನಿವನ
7) ಬುದ್ಧನು ಮಹಾ ಪರಿನಿರ್ವಾಣ ಹೊಂದಿದ ಸ್ಥಳ ಯಾವುದು?
ಉ. ಕುಶಿನಗರ
- ಕ್ರಿ.ಪೂ. 486
8) ಮೊದಲ ಬೌದ್ಧ ಸಮ್ಮೇಳನ ನಡೆದ ಸ್ಥಳ ಯಾವುದು?
ಉ. ರಾಜಗ್ರಹ
- ಅಧ್ಯಕ್ಷತೆ : ಮಹಾ ಕಶ್ಯಪ
9) ಹುಯೆಂತ್ಸಂಗ್ ಅಧ್ಯಕ್ಷತೆ ವಹಿಸಿದ ಬೌದ್ಧ ಸಮ್ಮೇಳನ ಯಾವುದು?
ಉ. 5 ನೇ ಬೌದ್ಧ ಸಮ್ಮೇಳನ
- ಕನೌಜ್ ನಲ್ಲಿ
10) ಯಾವ ಸಮ್ಮೇಳನದಲ್ಲಿ ಬೌದ್ಧಧರ್ಮ ಇಬ್ಭಾಗವಾಯಿತು?
ಉ. ನಾಲ್ಕನೇ ಬೌದ್ಧ ಸಮ್ಮೇಳನ
1) ಹೀನಾಯಾನ
2) ಮಹಾಯಾನ
- ಸ್ಥಳ : ಕುಂಡಲಿವನ
- ಕ್ರಿ.ಶ. 102 ದಿಲ್ಲಿ
- ಅಧ್ಯಕ್ಷತೆ - ವಸುಮಿತ್ರ
ವಿಜ್ಞಾನ - 10
1) ನೀರಿನ ತಾತ್ಕಾಲಿಕ ಗಡಸುತನಕ್ಕೆ ಕಾರಣವಾಗುವ ಲವಣಗಳು ಯಾವುವು?
ಉ. ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಬೈಕಾರ್ಬೋನೇಟ್
2) ನೀರಿನ ಶಾಶ್ವತ ಗಡಸುತನಕ್ಕೆ ಕಾರಣವಾಗುವ ಲವಣಗಳು ಯಾವುವು?
ಉ. ಕ್ಯಾಲ್ಸಿಯಂ, ಮೆಗ್ನೀಷಿಯಂ ಕ್ಲೋರೈಡ್ ಮತ್ತು ಸಲ್ಫೇಟ್ ಗಳು
3) ವಲ್ಕನಿಕರಣ ಎಂದರೇನು
ಉ. ರಬ್ಬರ್ ನೊಂದಿಗೆ ಗಂಧಕ ಸೇರಿಸಿ ಗಟ್ಟಿಗೊಳಿಸುವುದು
4) ಜೀವಕೋಶದಲ್ಲಿ ಪ್ರೋಟೀನ್ ಕಾರ್ಖಾನೆ ಗಳನ್ನು ಯಾವುದನ್ನು ಕರೆಯುತ್ತಾರೆ?
ಉ. ರೈಬೋಸೋಮ್ ಗಳು
5) ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?
ಉ. ವಿಟಮಿನ್ ಬಿ ಮತ್ತು ಸಿ
6) ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?
ಉ. ವಿಟಮಿನ್ ಎ ಡಿ ಇ ಮತ್ತು ಕೆ
7) ಕಬ್ಬಿಣಾಂಶದ ಕೊರತೆಯಿಂದ ಯಾವ ರೋಗ ಬರುತ್ತದೆ?
ಉ. ಅನಿಮಿಯ
8) ಮೆದುಳಿನ ಅತಿ ದೊಡ್ಡ ಭಾಗ ಸೆರೆಬ್ರಮ್ (ಮಹಾಮಸ್ತಿಷ್ಕ) ವನ್ನು ಏನೆನ್ನುವರು?
ಉ. ಜ್ಞಾಪಕ ಶಕ್ತಿಯ ಉಗ್ರಾಣ
9) ದೇಹದ ರಾಸಾಯನಿಕ ಕಾರ್ಖಾನೆ ಎಂದು ಯಾವುದನ್ನು ಕರೆಯುತ್ತಾರೆ?
ಉ. ಪಿತ್ತಕೋಶ
10) ನೀರು ತುಂಬಿದ ತೊಟ್ಟಿಯ ತಳಭಾಗ ಮೇಲೆ ಬಂದಂತೆ ಕಾಣುವುದು ಇದು ಬೆಳಕಿನ ಯಾವ ವಿದ್ಯಮಾನ?
ಉ. ಬೆಳಕಿನ ವಕ್ರೀಭವನ
ಭೂಗೋಳಶಾಸ್ತ್ರ - 10
1) ಭಾರತದಲ್ಲಿ ಆನೆ ಯೋಜನೆ ಪ್ರಾರಂಭವಾದ ವರ್ಷ ಯಾವುದು?
ಉ. 1992
2) ಭೋಪಾಲ್ ಅನಿಲ ದುರಂತದಲ್ಲಿ (1984 ಡಿ. 2-3 ರೈ ರಾತ್ರಿ) ಬಿಡುಗಡೆಯಾದ ಅನಿಲ ಯಾವುದು?
ಉ. ಮಿಥೈಲ್ ಐಸೋಸೈನೇಟ್
3) ರೆಡ್ಡ್ ಡೇಟಾ ಬುಕ್ ಯಾವುದಕ್ಕಾಗಿ ಮತ್ತು ಯಾವ ದೇಶ ಪ್ರಕಟಿಸುತ್ತದೆ?
ಉ. ಅಳಿವಿನ ಅಂಚಿನಲ್ಲಿರುವ ಪ್ರಾಣಿ ಸಸ್ಯ ಮತ್ತು ಶಿಲಿಂದ್ರಗಳ ಬಗ್ಗೆ ಮತ್ತು ಇದನ್ನು ರಷ್ಯಾ ದೇಶ ಪ್ರಕಟಿಸುತ್ತದೆ
4) ಹಣ್ಣುಗಳ ಅಧ್ಯಯನವನ್ನು ಏನೆನ್ನುವರು?
ಉ. ಪಾಮೋಲಜಿ
5) ಹೂಗಳ ಅಧ್ಯಯನವನ್ನು ಏನೆನ್ನುವರು?
ಉ. ಫ್ಲೋರಿಕಲ್ಚರ್
6) ಭಾರತದಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ ಯಾವುದು?
ಉ. ಪಶ್ಚಿಮ ಬಂಗಾಳ
7)
ಭಾರತದ ಭತ್ತದ ಕಣಜ ಎಂದು ಯಾವ ರಾಜ್ಯವನ್ನು ಕರೆಯುತ್ತಿದ್ದರು?
ಉ. ಆಂಧ್ರಪ್ರದೇಶ
8) ಭಾರತದಲ್ಲಿ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು?
ಉ. ಉತ್ತರಪ್ರದೇಶ
9) ಭೂಮಿಯ ಗೊಬ್ಬರದ ಕಾರ್ಖಾನೆಗಳೆಂದು ಏನನ್ನು ಕರೆಯುತ್ತಾರೆ?
ಉ. ದ್ವಿದಳ ಧಾನ್ಯಗಳನ್ನು
10) ಎಣ್ಣೆಕಾಳುಗಳ ಸಂಶೋಧನ ಕೇಂದ್ರ ಭಾರತದ ಯಾವ ನಗರದಲ್ಲಿದೆ?
ಉ. ಹೈದರಾಬಾದ್
ಪ್ರಚಲಿತ ಘಟನೆಗಳು - 10
1) ಇತ್ತೀಚಿಗೆ ನಿಧನರಾದ ಸಿಬಿಐ ಮಾಜಿ ನಿರ್ದೇಶಕರು ಯಾರು?
ಉ. ರಂಜಿತ್ ಸಿನ್ಹಾ
2) 2021ರ ಅಂತರಗತ ಇಂಟರ್ನೆಟ್ ಸೂಚ್ಯಂಕದಲ್ಲಿ ಭಾರತದ ಸ್ಥಾನ ಎಷ್ಟು?
ಉ. 49
- ಪ್ರಥಮ ಸ್ಥಾನ - ಸ್ವೀಡನ್
3) ಇತ್ತೀಚಿಗೆ ಯಾವ ಪಾಕಿಸ್ತಾನ ಕ್ರಿಕೆಟರ್ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ?
ಉ. ಬಾಬರ್ ಆಜಮ್
4) ಹವಾಮಾನ ಬದಲಾವಣೆಗೆ ಶಾಸನಗಳನ್ನು ತಂದ ಮೊದಲ ದೇಶ ಯಾವುದು?
ಉ. ಬಾಂಗ್ಲಾದೇಶ
5) ಇತ್ತೀಚಿಗೆ ಸ್ಟಾರ್ ಇಂಡಿಯಾ ಕಂಪನಿಯ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಯಿತು?
ಉ. ಕೆ ಮಾಧವನ್
6) ಇತ್ತೀಚಿಗೆ ನಿಧನರಾದ ಪ್ರಸಿದ್ಧ ಇತಿಹಾಸಕಾರ ಮತ್ತು ಪದ್ಮಶ್ರೀ ಗೌರವಾನ್ವಿತ ಯಾರು?
ಉ. ಯೋಗೇಶ್ ಪ್ರವೀಣ್
7) ಇತ್ತೀಚಿಗೆ ಆಸ್ಟ್ರಾ ಜೆನಿಕಾ ಲಸಿಕೆಯನ್ನು ತ್ಯಜಿಸಿದ ಯುರೋಪಿಯನ್ ಯೂನಿಯನ್ ನ ಮೊದಲ ದೇಶ ಯಾವುದು?
ಉ. ಡೆನ್ಮಾರ್ಕ್
8) ಇತ್ತೀಚಿಗೆ ಯಾವ ದೇಶದಲ್ಲಿ ಯುಎಸ್ ತನ್ನ ಮಿಲಿಟರಿ ಪಡೆಯನ್ನು ಸಂಪೂರ್ಣ ಹಿಂಪಡೆಯುವುದಾಗಿ ಘೋಷಿಸಿದೆ? ಉ. ಅಫ್ಘಾನಿಸ್ತಾನ
9) ಇತ್ತೀಚೆಗೆ ನಾಡಾದ ಹೊಸ ಮಹಾನಿರ್ದೇಶಕರಾಗಿ ಯಾರನ್ನು ಹೆಸರಿಸಲಾಗಿದೆ?
ಉ. ಸಿದ್ದಾರ್ಥ್ ಲಾಂಗ್ ಜಾಮ್
10) ಇತ್ತೀಚಿಗೆ ಕೋವಿಡ್-19 ವಿರುದ್ಧ ಹೋರಾಡಲು 14 ದಿನಗಳ ಮುಖವಾಡ ಅಭಿಯಾನ ಆರಂಭಿಸಿದ ರಾಜ್ಯ ಯಾವುದು?
ಉ. ಒಡಿಶಾ
ನಮ್ಮ ಹಿಂದಿನ Episode
Comments
Post a Comment