KPSC ACADEMY | Episode 14 | Constitution - 05, History - 05, Science - 05, Geography - 05 and Current affairs - 05
KPSC ACADEMY
Episode - 14
ಸಂವಿಧಾನ
Top - 05
1) ರಾಜ್ಯಗಳ ಮೇಲೆ ರಾಷ್ಟ್ರಪತಿ ಆಡಳಿತವನ್ನು ಹೇರುವ ಅಧಿಕಾರ ವನ್ನು ಕೇಂದ್ರಕ್ಕೆ ನೀಡುವ ವಿಧಿ ಯಾವುದು?
ಉ. 356 ನೇ ವಿಧಿ
2) ಯೋಜನಾ ಆಯೋಗದ ಅಧ್ಯಕ್ಷರು ಯಾರಾಗಿರುತ್ತಾರೆ?
ಉ. ಪ್ರಧಾನ ಮಂತ್ರಿಗಳು
3) ಭಾರತದ ಒಕ್ಕೂಟದಲ್ಲಿ ಹೊಸ ರಾಜ್ಯವನ್ನು ರೂಪಿಸುವ ಅಧಿಕಾರ ಯಾರಿಗಿರುತ್ತದೆ?
ಉ. ಭಾರತದ ಸಂಸತ್ತು
4) ಭಾರತ ಸಂವಿಧಾನದ ಯಾವ ಅನುಚ್ಛೇದದ ಪ್ರಕಾರ ಮಿತ್ತ ಆಯೋಗವನ್ನು ಸ್ಥಾಪಿಸಲಾಗುತ್ತಿದೆ?
ಉ. 280
5) ತಪ್ಪು ಬಂಧನದ ಸಂದರ್ಭದಲ್ಲಿ ಯಾವ ರಿಟ್ ಅಥವಾ ಆಜ್ಞೆಯನ್ನು ಹೊರಡಿಸಲಾಗುತ್ತದೆ?
ಉ. ಬಂಧೀ ಪ್ರತ್ಯಕ್ಷೀಕರಣ
ಇತಿಹಾಸ
Top - 05
1) ಖ್ಯಾತ ವಿದ್ವಾಂಸ ಅಲ್ಬೆರೂನಿ ಗೆ ಆಶ್ರಯ ನೀಡಿದವರು ಯಾರು?
ಉ. ಘಜ್ನಿ ಮೊಹಮ್ಮದ್
2) ಕುತುಬ್ ಮಿನಾರ್ ಬಳಿಯಿರುವ ಪ್ರಸಿದ್ಧ ಉಕ್ಕಿನ ಸ್ತಂಭ ಯಾವ ರಾಜವಂಶಕ್ಕೆ ಸೇರಿದೆ?
ಉ. ಗುಪ್ತರು
3) ಯಾವ ರಾಜನನ್ನು ವೈರುದ್ಧ್ಯಗಳ ಮಿಶ್ರಣ ಎಂದು ಕರೆಯುತ್ತಾರೆ?
ಉ. ಮಹಮ್ಮದ್ ಬಿನ್ ತುಘಲಕ್
4) ಕಾಕತೀಯರ ರಾಜಧಾನಿಯ ಪ್ರಾಚೀನ ಹೆಸರೇನು?
ಉ. ಏಕಶಿಲಾ ನಗರಿ
5) ದೇಶಬಂಧು ಎಂದು ಯಾರನ್ನು ಕರೆಯುತ್ತಾರೆ?
ಉ. ಸಿ. ಆರ್. ದಾಸ್
ವಿಜ್ಞಾನ
Top - 05
1) ನೀರನ್ನು ಶುದ್ಧೀಕರಿಸಲು ನೀರಿನಲ್ಲಿ ಯಾವ ಅನಿಲವನ್ನು ಹಾಯಿಸುತ್ತಾರೆ?
ಉ. ಕ್ಲೋರಿನ್
2) ನೀರಿನ ಟ್ಯಾಂಕ್ ನಲ್ಲಿರುವ ಪಾಚಿಯನ್ನು ನಾಶ ಪಡಿಸಲು ಬಳಸುವ ರಾಸಾಯನಿಕ ಯಾವುದು?
ಉ. ಕಾಪರ್ ಸಲ್ಫೇಟ್
3) ಜೌಗು ಅನಿಲ ಎಂದು ಕರೆಯಲ್ಪಡುವ ಅಂಗ ಯಾವುದು?
ಉ. ಮೀಥೇನ್
4) ಜಲಗಾಜು ಅನ್ನು ರಾಸಾಯನಿಕವಾಗಿ ಏನೆನ್ನುತ್ತಾರೆ?
ಉ. ಸೋಡಿಯಂ ಸಿಲಿಕೇಟ್
5) ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ ಯಾವುದು?
ಉ. ಭೂಮಿ
ಭೂಗೋಳಶಾಸ್ತ್ರ
Top- 05
1) ಸಾಂಬರ್ ಸರೋವರ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ಉ. ರಾಜಸ್ಥಾನ
2) ಭಾರತದ ಅತಿ ಹಳೆಯ ಪರ್ವತಗಳು ಯಾವುವು?
ಉ. ಅರಾವಳಿ ಬೆಟ್ಟಗಳು
3) ಮಹಾದೇವ ಬೆಟ್ಟಗಳಲ್ಲಿರುವ ಪ್ರಮುಖ ಗಿರಿಧಾಮ ಯಾವುದು?
ಉ. ಪಂಚಮಸಾಲಿ
4) ಯಾವ ನದಿಯು ಉತ್ತರ ದಿಕ್ಕಿಗೆ ಹರಿದು ಗಂಗಾ ನದಿಯನ್ನು ಸೇರುತ್ತದೆ?
ಉ. ಚಂಬಲ್ ನದಿ
5) ನಾಸಿಕ್ ನಗರವು ಯಾವ ನದಿ ದಂಡೆಯ ಮೇಲಿದೆ?
ಉ. ಗೋದಾವರಿ
ಪ್ರಚಲಿತ ಘಟನೆಗಳು
Top - 05
1) ಇತ್ತೀಚಿಗೆ ಕೇಂದ್ರ ಟಿಬೇಟಿಯನ್ ಆಡಳಿತ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
ಉ. ಪೆನ್ಪಾ ತ್ಸೆರಿಂಗ್
2) ಇತ್ತೀಚಿಗೆ ಇಂಗ್ಲೆಂಡ್ನ ಹ್ಯಾರಿ ಗರ್ನಿ ಯಾವ ಕ್ರೀಡೆಯಿಂದ ನಿವೃತ್ತರಾಗಿದ್ದಾರೆ?
ಉ. ಕ್ರಿಕೆಟ್
3) ಇತ್ತೀಚಿಗೆ ಮಾಡಿ ದೇಶದ ನೂತನ ಪ್ರಧಾನಿಯಾಗಿ ಯಾರು ಆಯ್ಕೆಯಾಗಿದ್ದಾರೆ?
ಉ. ಮೊಕ್ಟರ್ ಒವಾನೆ
4) ಇತ್ತೀಚಿಗೆ ಅದಾನಿ ಗ್ರೂಪ್ ತನ್ನ ಪ್ರಾದೇಶಿಕ ನೂತನ ಕಚೇರಿಯನ್ನು ಯಾವ ದೇಶದಲ್ಲಿ ಪ್ರಾರಂಭಿಸಿದೆ?
ಉ. ಸಿಂಗಾಪುರ
5) ವಿಶ್ವಸಂಸ್ಥೆಯ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಚಹಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉ. ಮೇ 21
Note : ಈ ನೋಟ್ಸ್ ನಿಮಗೆ ಇಷ್ಟ ಆದರೆ ಈ ಕೆಳಗಿನ Ad ಮೇಲೆ ಕ್ಲಿಕ್ ಮಾಡಿ
ನಮ್ಮ ಹಿಂದಿನ ನೋಟ್ಸ್ 👇 👇
For instant notification join our following groups
Comments
Post a Comment